15 YouTube views, likes subscribers in 10 minutes. Free!
Get Free YouTube Subscribers, Views and Likes

ಕಾಳಿಂಗ ನಾವುಡರ ನಾಗಶ್ರೀ ಪ್ರಸಂಗದ ಲೈವ್ ವಿಡಿಯೋ ಭಾಗ-1

Follow
Ulloor Live

ಗಾನಗಂಧರ್ವ ಆವೃತ್ತಿ

ನಾಗಶ್ರೀ.

09101989 ಸೋಮವಾರ ರಾತ್ರಿ 10 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶಂಕರ ರಾವ್ ಬೃಹ್ಮಾವರ ಇವರ ಸಂಯೋಜನೆಯಲ್ಲಿ ಕಾಳಿಂಗ ನಾವುಡರು ರಚಿಸಿರುವ "ನಾಗಶ್ರೀ" ಪ್ರಸಂಗವು ಏರ್ಪಟ್ಟಿತು.

ಮರವಂತೆ ನರಸಿಂಹ ದಾಸರು ಮತ್ತು ಶೀನದಾಸರು.

ಆಗಿ ಕಾಲದಲ್ಲಿ ಮೇರು ಭಾಗವತರಾದ ಮರವಂತೆ ನರಸಿಂಹ ದಾಸರು ಮತ್ತು ಶೀನ ದಾಸರು ತುಂಬಾ ಪ್ರಖ್ಯಾತಿ ಹೊಂದಿದ್ದರು.

ಇದೇ ಮೊದಲ ಬಾರಿಗೆ ಸಾಮಾಜಿಕ ಪ್ರಸಂಗದಲ್ಲಿ ತಮ್ಮ ಕಂಚಿನ ಕಂಠದ ಮೂಲಕ ನಾಗಶ್ರೀ ಪ್ರಸಂಗದಲ್ಲಿ ಭಾಗವತಿಕೆ ಮಾಡಿ ಮುನ್ನುಡಿ ಬರೆದರು.

ನಾವುಡರಿಗೆ ಮತ್ತು ದಾಸ ಭಾಗವತರಿಗೆ ಸನ್ಮಾನ ಸಹ ಏರ್ಪಟ್ಟಿತು.

ತುಂಬು ಗೃಹದಲ್ಲಿ ಪ್ರದರ್ಶನಗೊಂಡ ಈ ಪ್ರಸಂಗವನ್ನು ವೀಡಿಯೋ ಚಿತ್ರಿಕರಣ ನಡೆಸಿ ಸಂಗ್ರಹಿಸಿ ಕಾಪಿಟ್ಟವರು ಶಂಕರ ರಾವ್ ಬೃಹ್ಮಾವರ ರವರು.

ಯಕ್ಷಗಾನವನ್ನು ಸಂಘಟಿಸುವುದೇ ಕಷ್ಟ ಅಂತ ಸಮಯದಲ್ಲಿ ಅದನ್ನೂ ವೀಡಿಯೋ ಚಿತ್ರಿಕರಣ ನಡೆಸಿರುವುದು ವಿಶೇಷ.ಅಷ್ಟೆ ಅಲ್ಲದೇ VCP ಕ್ಯಾಸೆಟ್ ನ್ನು ಸುರಕ್ಷೀತವಾಗಿ ಕಾಪಿಟ್ಟರು.

201415 ರಲ್ಲಿ ನಾವುಡರ ಅಭಿಮಾನಿಯಾದ ಕೊಲ್ಲೂರಿನ ಸುದರ್ಶನ ಜೋಯಿಸರಿಗೆ ಸ್ನೇಹಿತರಿಂದ ನಾಗಶ್ರೀ ಪ್ರಸಂಗದ VCP ಕ್ಯಾಸೆಟ್ ಇರುವ ಮಾಹಿತಿ ತಿಳಿದದ್ದೆ ತಡ ಕೂಡಲೇ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸಿ ಅವರನ್ನು ಭೇಟಿಯಾಗಿ ವಿಡಿಯೋ ಕ್ಯಾಸೇಟನ್ನು ಪಡೆಯುವಲ್ಲಿ ಸಫಲರಾದರು. ಸ್ನೇಹಿತ ದಿನೇಶ ಉಪ್ಪೂರ್ ಬಳಿ ಅದನ್ನು ಕೊಟ್ಟರು. ಆ ಸಮಯದಲ್ಲಿ ವಿ.ಸಿ.ಪಿ. ಪ್ಲೇಯರ್ ಗಳು ಮೂಲೆ ಸೇರಿದ್ದವು. ಕೊನೆಗೆ ಅದನ್ನು ಉಡುಪಿಯಲ್ಲಿ ವಿ.ಸಿ.ಪಿ.ಯಿಂದ ವಿ.ಸಿ.ಡಿ ಗೆ ಹಣ ವ್ಯಯಿಸಿ convert ಮಾಡಿಸಿದರು.

ಕಾಳಿಂಗ ನಾವುಡರ ಹಾಡುಗಳು, ವಿಡಿಯೋಗಳನ್ನು ಸಂಗ್ರಹಿಸುವ ಕಾರ್ಯ ಮಾಡುತ್ತಿರುವ ನನಗೆ ಇತ್ತಿಚೆಗೆ ಅವರ ಬಳಿಯಿರುವ ನಾವುಡರ ಎಲ್ಲಾ ಪೈಲ್ ಗಳನ್ನು ನೀಡಿದರು. ಉಪ್ಪೂರ್ ಮತ್ತು ಜೋಯಿಸರ ಪರಿಶ್ರಮದಿಂದ ಇವತ್ತು ಈ ಪ್ರಸಂಗ ನೋಡಲು ಸಾದ್ಯವಾಗಿದ್ದು. ಅವರಿಗೆ ನಿಮ್ಮೆಲ್ಲರ ಪರವಾಗಿ ಕೃತಜ್ಞತೆ ಯನ್ನು ಸಲ್ಲಿಸುತ್ತೇನೆ.

ಗಣೇಶ ಕಾಮತ್ ಉಳ್ಳೂರ್.

posted by Pitraccirty3h