YouTube magic that brings views, likes and suibscribers
Get Free YouTube Subscribers, Views and Likes

ರಟ್ಟಿಹಳ್ಳಿ ಸಾಧಕಿ: ಒಂದು ಯಂತ್ರದಿಂದ ಆರಂಭಿಸಿದ ಅಗರಬತ್ತಿ ತಯಾರಿಕೆ ಈಗ 25 ಲಕ್ಷ ರೂ. ಉದ್ಯಮ | Vijay Karnataka

Follow
Vijay Karnataka | ವಿಜಯ ಕರ್ನಾಟಕ

ಮಾರ್ಚ್‌ 8 ವಿಶ್ವ ಮಹಿಳಾ ದಿನಾಚರಣೆ. ಮಹಿಳೆಯರಿಗೆ ಮೀಸಲಾದ ಈ ದಿನ, ಸಾಧಕಿಯೊಬ್ಬರ ಸಾಧನೆಯ ಬಗ್ಗೆ ನೋಡೋಣ. ಇವರು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದ ರೂಪಾ ಶಿವು ಅಂಬ್ಲೇರ್. ರಟ್ಟಿಹಳ್ಳಿ ಪಟ್ಟಣದ ಸಾಮಾನ್ಯ ಮಹಿಳೆ. ಇವರೀಗ 'ಮಹಾಲಕ್ಷ್ಮಿ ಅಗರಬತ್ತಿ' ಇಂಡಸ್ಟ್ರೀಜ್‌
ಒಡತಿ. ಅಗರಬತ್ತಿ ಕೈಗಾರಿಕೆಯ ವಿವಿಧ ಕೆಲಸಗಳಿಗೆ 12 ಜನ ಮಹಿಳೆಯರನ್ನು ನೇಮಿಸಿಕೊಂಡು ಅವರ ಬದುಕಿನ ಬುತ್ತಿಯನ್ನೂ ರೂಪಾ ಕಟ್ಟಿಕೊಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆ ಧರ್ಮಸ್ಥಳ ಸ್ತ್ರೀಶಕ್ತಿ ಸಂಘದಲ್ಲಿ ಸದಸ್ಯಳಾಗಿ ಕ್ಷೇತ್ರ ದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಆಕರ್ಷಿಸಿದ್ದು ಅರಗಬತ್ತಿ ತಯಾರಿಸುತ್ತಿದ್ದ ಮಹಿಳೆ. ಇದರಿಂದ ಪ್ರೇರಿತರಾದ ರೂಪಾ, ನಾನು ಕೂಡ ಯಾಕೆ ಅಗರಬತ್ತಿ ಉದ್ಯಮ ನಡೆಸಬಾರದು? ಅನ್ನೋ ಆಲೋಚನೆ ಹುಟ್ಟಿತ್ತು. ಸ್ಥಳೀಯರ ಸಹಕಾರದಿಂದ ಒಂದು ಅಗರಬತ್ತಿ ಮೆಷಿನ್‌ ಖರೀದಿಸಿ, ಅಗರಬತ್ತಿ ಉತ್ಪಾದನೆ ಶುರು ಮಾಡಿಯೇ ಬಿಟ್ಟರು. ಅಗರಬತ್ತಿ ತಯಾರಿಕೆಯಲ್ಲಿ ಪಳಗಿದ ರೂಪಾ ತನ್ನೊಟ್ಟಿಗೆ ಇತರ ಮಹಿಳೆಯರ ಬದುಕು ಕಟ್ಟಿಕೊಡಲು ನಿರ್ಧರಿಸಿದರು. ಇನ್ನೂ ಎಂಟು ಯಂತ್ರಗಳನ್ನು ತಂದು ಮತ್ತಷ್ಟು ಮಹಿಳೆಯರಿಗೆ ಉದ್ಯೋಗ ನೀಡಿದರು. 12 ಮಹಿಳೆಯರಿಗೆ ಕೆಲಸ ನೀಡಿದ್ದು, ಅವರಿಗೆ ತಿಂಗಳಿಗೆ 6 ಸಾವಿರ ರೂಪಾಯಿ ವೇತನ ನೀಡುತ್ತಿದ್ದಾರೆ. ಒಂದು ಯಂತ್ರದಿಂದ ಆರಂಭವಾದ ಈ ಉದ್ಯಮವು ಇದೀಗ 25 ಲಕ್ಷ ರೂಪಾಯಿ ಉದ್ಯಮವಾಗಿ ಬೆಳೆದು ನಿಂತಿದೆ.

Raw Agarbatti Manufacturing Factory By Rattihalli Women Entrepreneur Work For 12 Ladies Rs 25 Lakhs Business

#haveri #womensday #entrepreneur


Our Website : https://Vijaykarnataka.com
Facebook:   / vijaykarnataka  
Twitter:   / vijaykarnataka  
Our Video Website: https://kannada.timesxp.com/

posted by belittle3b