Grow your YouTube views, likes and subscribers for free
Get Free YouTube Subscribers, Views and Likes

EPFO | EPS95 | NAC | KSRTC | BMTC | ಇಪಿಎಸ್ ಪಿಂಚಣಿಗಾರರ ಬೃಹತ್ ಪ್ರತಿಭಟನೆ | ನಿಧಿ ಆಪ್ಕೆ ನಿಕಟ್ | ಇಪಿಎಫ್ಓ

Follow
BPN

#eps95 #epfo #eps_95 #eps95latest #eps95nuntmpension #eps95hikenews #eps95latestnewstoday #epson #epstopik #eps #eps95higherpension #eps95 #epl #eps #ep #episode #epicgames #epfonews #epfoeo #epfo_new_update_2023 #epfl #epfo_latest_news_2022 #epfocurrentaffairs #epfo_latest_update #epf #epf #epfo_pension_news_today #epfonews #epfo_nomination #ksrtc #ksrtcemployees #bmtc #centralgovernment #centralminister #cmofkarnataka #cmsiddaramaiah #pmmodi #pmoindia #pmoindia #pmooffice #narendramodi #eps95 #epfo #eps #epfonews #eps95higherpension #epfo_pension_news_today #epfo_latest_news_2022 #cmofkarnataka #eps95hikenews


ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗು ಬಿಎಂಟಿಸಿ ಮತ್ತು ಕೆಎಸ್ಆರ್‌ಟಿಸಿ ವತಿಯಿಂದ ಆಯೋಜಿಸಿದ್ದ, ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ, ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ, ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮದಂದು ಜರುಗಿತು. ಸಂಯಮ, ಶಿಸ್ತು ಮತ್ತು ಶಾಂತಿಗೆ ಹೆಸರಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಹಾಗು ಇತರೆ ಹತ್ತಾರು ಕಂಪನಿಗಳ ನಿವೃತ್ತರ ನೌಕರರು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದು, ಇಂದು ನಿವೃತ್ತರ ಆಕ್ರೋಶದ ಕಟ್ಟೆ ಒಡೆದಿತ್ತು. ಈ ಪ್ರತಿಭಟನಾ ಸಭೆಗೆ ಸಮರೋಪಾದಿಯಲ್ಲಿ ಜನಸಾಗರವೇ ನೆರೆದಿತ್ತು. ನಿವೃತ್ತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಚೇರಿ ಆವರಣದಲ್ಲಿ, ಅಧಿಕಾರಿಗಳ ವಿರುದ್ಧ ಕೂಗಿದ ಧಿಕ್ಕಾರದ ಘೋಷಣೆ ಮಾರ್ದನಿಸಿತು. ಸಂಘದ ಪ್ರಧಾನ ಕಾರ್ಯದರ್ಶಿ ಡೋಲಪ್ಪನವರು, ಎಲ್ಲಾ ಮುಖಂಡರು ಹಾಗೂ ಪ್ರತಿಭಟನಾಕಾರರನ್ನು ಸ್ವಾಗತಿಸಿ, ಹೋರಾಟದ ರೂಪುರೇಷೆ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯ ಸಂಯೋಜಕರಾದ ಶ ರಮಕಾಂತ ನರಗುಂದ ರವರು ಮಾತನಾಡಿ, ಹಿಂದಿನ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬಂದಿದ್ದು, ಜುಲೈ 29 ಹಾಗೂ 30 ರಂದು, ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಎಲ್ಲಾ ಎನ್ಎಸಿ ಮುಖಂಡರು ನವದೆಹಲಿಯಲ್ಲಿ ಒಗ್ಗೂಡಿ, ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ, ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದಿರುತ್ತಾರೆ. ಕಾರ್ಯಾಧ್ಯಕ್ಷರಾದ ನಂಜುಂಡೇಗೌಡ ರವರು ಮಾತನಾಡಿ, ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪನ್ನು ಇಪಿಎಫ್ಓ ಅಧಿಕಾರಿಗಳು ಧಿಕ್ಕರಿಸಿ, ಇಪಿಎಸ್ ನಿವೃತ್ತರ ಬದುಕಿನ ಜೊತೆ ಇವರು ಚೆಲ್ಲಾಟವಾಡುತ್ತಿದ್ದು, ಮುಂದಿನ ದಿನಗಳಲ್ಲಿ ನ್ಯಾಯಾಲಯ ನಿಂದನಾ ಅರ್ಜಿಯಲ್ಲಿ ಇವರಿಗೆ ತಕ್ಕ ಶಾಸ್ತಿ ಆಗಲಿದೆ ಎಂದಿರುತ್ತಾರೆ. ಎಲ್ಲಾ ಇಪಿಎಸ್ ನಿವೃತ್ತರಿಗೆ ಕನಿಷ್ಠ ಹೆಚ್ಚುವರಿ ಪಿಂಚಣಿ ರೂ 7,500 + ಭತ್ಯೆ, ಹಾಗೂ ವೈದ್ಯಕೀಯ ಸೌಲಭ್ಯವನ್ನು ವಿಸ್ತರಿಸಬೇಕೆಂದು ಆಗ್ರಹಿಸಿರುತ್ತಾರೆ. ಎಲ್ಲ ನಿವೃತ್ತರು ಒಗ್ಗಟ್ಟು ಪ್ರದರ್ಶಿಸಬೇಕು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ಪ್ರತಿಭಟನಾ ಸಭೆಗೆ ಆಗಮಿಸಬೇಕು, ಸರ್ಕಾರದ ಗಮನ ಸೆಳೆಯಬೇಕು ಎಂದು ಅಧ್ಯಕ್ಷರಾದ ಶಂಕರ್ ಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು. ಕಮಾಂಡರ್ ಶ್ರೀ ಅಶೋಕ್ ರಾಹುತ್ ರವರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ, ಎನ್‌ಎಸಿ ಸಂಘಟನೆ ಅತ್ಯಂತ ಬಲಿಷ್ಠ ವಾಗಿದ್ದು, ತಾವೆಲ್ಲರೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಲಪಡಿಸಬೇಕೆಂದು, ಎನ್ಎಸಿ ಉಪಾಧ್ಯಕ್ಷರಾದ ವೀರ ಕುಮಾರ್ ಗಡದ್ ರವರು ಮನವಿ ಮಾಡಿರುತ್ತಾರೆ ಇಪಿಎಫ್ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದು, ಇಪಿಎಸ್ ನಿವೃತ್ತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ಪಿಂಚಣಿ ಲೆಕ್ಕಾಚಾರದ ತಕ್ತೆ ನೀಡುತ್ತಿಲ್ಲ ಎಂದು, ಸುಬ್ಬಣ್ಣ ತಮ್ಮ ಆಕ್ರೋಶ ವ್ಯಕ್ತಪಡಿಸಿರುತ್ತಾರೆ. ಚಿಕ್ಕಬಳ್ಳಾಪುರ ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ, ಶ್ರೀನಿವಾಸ ನಾಯ್ಡು ಅವರು ಮಾತನಾಡಿ, ಇಪಿಎಫ್ಓ ಅಧಿಕಾರಿಗಳು ನಿವೃತ್ತರ ಬಗ್ಗೆ ತಳೆದಿರುವ ಧೋರಣೆ ಅಸಹನೀಯವಾಗಿದ್ದು, ಇದಕ್ಕೆ ಇತಿಶ್ರೀ ಹಾಡಲೇ ಬೇಕು ಎಂದಿರುತ್ತಾರೆ. ಅಂತಿಮವಾಗಿ ಮನವಿ ಪತ್ರ ಸ್ವೀಕರಿಸಲು ಸ್ಥಳಕ್ಕಾಗಮಿಸಿದ ಇಪಿಎಫ್ಓ ಅಧಿಕಾರಿಗಳಿಗೆ, ಈ ವರೆಗಿನ ಎಲ್ಲಾ ಬೆಳವಣಿಗೆಗಳನ್ನು ತಿಳಿಸುವಂತೆ ಮುಖಂಡರು ಕೇಳಿದ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರಿಸಲಾಗದೆ ತಬ್ಬಿಬ್ಬಾದರು. ನಂತರ ನಮ್ಮ ಮನವಿಪತ್ರವನ್ನು ಸ್ವೀಕರಿಸಿ, ನಮ್ಮ ಎಲ್ಲ ಮನವಿ ಪತ್ರಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯಕ್ಕೆ ಈಗಾಗಲೇ ಕಳುಹಿಸಿಕೊಟ್ಟಿದ್ದು, ಅದರ ಎಲ್ಲಾ ವಿವರಗಳನ್ನು ನೀಡುವುದಾಗಿ, ಇಂದಿನ ಮನವಿ ಪತ್ರವನ್ನು ಸಹ ತಮ್ಮ ಉಲ್ಲೇಖದೊಂದಿಗೆ ಕಳುಹಿಸಿಕೊಡುವುದಾಗಿ ತಿಳಿಸಿರುತ್ತಾರೆ. ಇಂದಿನ ಸಭೆಯ ನಿರ್ವಹಣೆಯನ್ನು ಪದಾಧಿಕಾರಿಗಳಾದ ನಾಗರಾಜು ಹಾಗೂ ಮನೋಹರ್ ರವರು, ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿಕೊಟ್ಟರು.

posted by Repekup