15 YouTube views, likes subscribers in 10 minutes. Free!
Get Free YouTube Subscribers, Views and Likes

ಶ್ರೀಧರ ಸ್ವಾಮಿಗಳ ಚರಿತ್ರೆ /ಪದ್ಯ ರೂಪದಲ್ಲಿ /shreedhara swamiji charitre

Follow
Amruta Sudhakar

ಶ್ರೀಧರ ಚರಿತ್ರೆ

ಶಿಷ್ಟ ಜನರೋ ಧಾರಕ್ಕಾಗಿಯೇ
ಅರ್ಥಿ ಯಿಂದಲಿ ಬಂದ ಗುರುವರ
ಸೃಷ್ಟಿಯೊಳಗಅವತಾರ ಮಾಡಿದ
ಮನುಜ ರೂಪಿನಲ್ಲಿ 1
ಬಂದು ಪಾದ ಕೆರಗಿದವರನ್ನು
ಚಂದದಿಂದಲಿ ಕಾಯುವ ಗುರುವರ
ಮಂದಮತಿ ಜನರೆಲ್ಲ ನೆನೆಯಿರಿ
ಗುರುಪದಾಂಬುಜವ 2
ಭಾವಭಕ್ತಿಯೋಳಅವರ ಪೂಜಿಸಿ
ನೀವು ಬ್ರಹ್ಮಾನಂದ ಪಡೆಯಿರಿ
ಯಾವ ಸಂಶಯ ಬೇಡ ಗುರುವಿನ ಪಾದವೇ ಗತಿಯು 3
ಯಾರು ಪೋಗದ ಮನೆಗೆ ಪೋಪರು
ಯಾರಿಗಾಗದ ಮನೆಗೆ ಪೋಪರು
ದಾರಿ ಕಾಣದ ಜನಕ್ಕೆ ಜ್ಞಾನದ ಬೆಳಕ ತೋರ್ದ ಪರು 4
ಒಂದು ಊರೋಳು ವಿಪ್ರ ತನುಜಯು
ಚಂದದಿಂದಲಿ ಗುರುವ ಪೂಜಿಸಿ
ಅಂದು ಶ್ರದ್ಧಾ ಭಕ್ತಿಯಿಂದ ಶ್ರೀ ಗುರುವ ಧ್ಯಾನಿಸಲು5
ಕಂಡು ಆಕೆಯ ಮನದ ಬಯಕೆಯ
ಬಂದ ಆಕೆಯ ಮನೆಗೆ ಗುರುವರ
ಕೊಂಡು ಪೂಜೆಯ ತಿರುಗಿ ಪೋದನು ಭಕ್ತರಿದ್ದೆಡೆಗೆ 6
ಒಂದು ಊರಳು ಭಿಕ್ಷೆ ಮುಗಿಯಿತು
ಚಂದದಿಂದಲಿ ಗುರು ಕೇಳಿದ
ಬಂದ ಜನರಿಗೆಲ್ಲ ತೀರ್ಥಪ್ರಸಾದ ವಾಯ್ತೆನು 7
ಎಂದ ಮಾತನು ಕೇಳ್ದ ವಿಪ್ರನು
ನೊಂದು ನಮಗೆಲ್ಲರಿಗೂ ಆಯಿತು
ಕಂದನೀಹನೋದುತ್ತ ಬೇರೆಡೆಗವನಿಗಿಲ್ಲವಲ್ಲ 8
ಆದರಾಗಲಿ ಕಳಿಸಿ ಕೊಡುವೆನು
ಈ ದಿನ ವ್ಯಥೆ ಬೇಡವೆಂದರು
ಶ್ರೀಧರರು ತೀರ್ಥ ಪ್ರಸಾದವ ಮುಟ್ಟಿಸಿದರಿಂತು 9
ಗಾಢ ನಿದ್ರೆಯಲ್ಲಿರುವ ಮಗನಿಗೆ
ಶ್ರೀಧರರು ತಾ ಬಂದು ತೀರ್ಥಪ್ರಸಾದವನು
ಮುದದಿಂದ ಕೊಟ್ಟಂತಾಯಿತೆನೆಂಬೆ 10
ಬಲದ ಹಸ್ತ ದಿ ತೀರ್ಥ ಬಿದ್ದಿತು
ತಲೆಯ ಮೇಲಕ್ಷತೆಯ ಕಂಡನು
ಒಲುಮೆಗೆ ಮಂತ್ರಾಕ್ಷತೆಯ ಗುರುವಿಂದ ತಾಪಡೆದ 11
ಒಡನೆ ಬರೆದನು ಮನೆಗೆ ಪತ್ರವ
ನಡೆದ ಸ್ವಪ್ನದ ಸಂಗತಿಗಳನ್ನು
ಮುದದಿ ಪತ್ರವ ನೋಡಿಕೊಂಡಾಡಿದರು ಗುರುವಾರನ 12
ಊರ ಜನರಿಗೆ ಪೀಡೆ ಕೊಡುತಿಹ
ಕ್ರೂರ ಭೂತ ಪ್ರೇತಗಳ ತಾ
ದೂರಪಡಿಸುತ ಹಲವು ಭಜಕರ ಪಾಲಿಸಿಹ ಗುರುವು 13
ಒಂದು ದಿನ ಶ್ರೀಧರರು ಸಾಗರವೆಂಬ
ಊರೊಳು ಇದ್ದ ಸಮಯದಿ
ಬಂದು ಪೇಳ್ದರು ಗುರುವೇ ಹಾಲೆ ಸಿಗದು
ಮುಂದೇನು14
ಎಂದ ಮಾತನು ಕೇಳ್ದ ಗುರುವರ
ಒಂದು ಕೊಡ ನೀರನ್ನು ತರಿಸಿದ
ಅಂದು ಮಂತ್ರಾಕ್ಷತೆಯ ತಳಿಯಲು ನೀರು ಹಾಲಾಯ್ತು 15
ಒಂದು ಊರಲಿ ವಿಪ್ರನೋರ್ವನು
ಹಿಂದಿನಿಂದಲಿ ಹೀನ ಸ್ಥಿತಿಯಲ್ಲಿ
ಬೆಂದು ಬಳಲುತ್ತಿದ್ದನು ಸೌಖ್ಯದ ದಾರಿ ಕಾಣದಲೇ 16
ಬಂದ ಗುರುವಿನ ಸುದ್ದಿ ಕೇಳುತ
ಒಂದೇ ಮನದಲ್ಲಿ ಓಡಿ ಬಂದನು
ಒಂದನೆಯ ಮಾಡುತ್ತಾ ಕುಳಿತನು
ಸ್ವಾಮಿಯೆದುರಿನಲಿ 17
ಚಿಂತೆಯೇತಕೆ ಮಗನೇ ನೀ
ನಿಶ್ಚಿಂತೆಯಿಂದಲಿ ಪೇಳ್ ನಿನ್ನ ವಿಷಯವ
ಎಂತು ಪೇಳಲಿ ಗುರುವೇ ಎನ್ನಯ ಹೀನ ಸ್ಥಿತಿಗತಿಯ 18
ಗುರುಗು ಕೌಳಿಗೆ ನೀರ ತರಿಸುತ
ಕರದಿ ಮಂತ್ರಾಕ್ಷತೆಯ ತಳಿದರು
ತೆರೆಯದಿರು ನೀ ಮಗನೇ ನಿನ್ನಯ ಮನೆಗೆ ಪೋಗುತನಕ 19
ಶಿರಾದೊಳಂತನು ಗುರುವ ನುಗ್ನೇಯ
ಗುರುವಸ್ಮರಿಸುತ್ತ ಮನೆಗೆ ನಡೆದನು
ಹರುಷಮಿಗೆ ಬಂಗಾರವಾದದ ಕಂಡನಾ ವಿಪ್ರ 20
ಧರೆಯೊಳಗೆ ವರ ಶೀಗೆಹಳ್ಳಿಯೋಳಿರಲು ಶ್ರೀ ಗುರು ಶ್ರೀಧರಯನು ಗುರುವರನ ದರ್ಶನಕನೇಕರು ಬಂದಿರಲು 21
ಮೆರೆವಚಪ್ಪರಕಾಗ ಹೊತ್ತಿತು ಉರಿಯು ಜನ ಕಂಗೆಡಲು
ಸದ್ಗುರು ವರನು ಕರತೀರ್ಥದಲ್ಲಿ ಅಗ್ನಿಯ ಶಾಂತಿಗೊಳಿಸಿದನು 22
ನಾಗವಿಷದಿಮ್ ಪಶುವು ಬೀಳಲು
ಯೋಗಿ ಗುರುವರ ಭೂರಿ ದಯದಿಂದಾಗ
ತೀರ್ಥವ ವಡೆಯೇ ಪಶು ಜೀವಿಸಿತು ಚೋದ್ಯವಲ 23
ಶುದ್ಧಮೂರುತಿ ಗುರು ಮಹಿಮೆಯನ
ಬುದ್ಧಿಹೀನನು ಬಣ್ಣಿಸಿಗೆ ತಡ
ಶುದ್ಧವಪ್ಪುದು ಸಹಜ ಬುಧ ಜನ ತಿದ್ದಿ ಓದುವುದು
ಹೊದ್ದದೆಂದಿಗೂ ಪಾಪುಲೇಶವು
ಶುದ್ಧ ಭಾವದಿ ಗುರುವ ಭಜಿಸಲು
ಸದ್ಗುರುವು ರಕ್ಷಿಪನು ಸಂತತ ತನ್ನ ನೆನ್ನೆವರನು 24
ರಾಮ ರಾಮ ರಾಮ ರಕ್ಷಿಸು
ರಾಮ ರಾಮ ರಾಮ ರಕ್ಷಿಸು ರಾಮ ರಾಮ ರಾಮ ರಕ್ಷಿಸು ರಾಮಶ್ರೀ ರಾಮ 25

posted by narco18s8